ಹರ್ ಗೋಬಿಂದ್ ಖೊರಾನ (9 ಜನವರಿ 1922 - 9 ನವೆಂಬರ್ 2011) ಒಬ್ಬ ಭಾರತೀಯ ಅಮೇರಿಕನ್ ಜೀವರಸಾಯನಶಾಸ್ತ್ರಜ್ಞರಾಗಿದ್ದರು , ಜೀವಕೋಶದ ಆನುವಂಶಿಕ ಸಂಕೇತವನ್ನು ಸಾಗಿಸುವ ನ್ಯೂಕ್ಲಿಯಿಕ್ ಆಮ್ಲಗಳಲ್ಲಿನ ನ್ಯೂಕ್ಲಿಯೊಟೈಡ್ಗಳ ಕ್ರಮವು ಪ್ರೋಟೀನ್ಗಳ ಕೋಶದ ಸಂಶ್ಲೇಷಣೆಯನ್ನು ನಿಯಂತ್ರಿಸುತ್ತದೆ ಎಂಬ ತಮ್ಮ ಸಂಶೋಧನೆಗೆ 1968 ರ ಶರೀರವಿಜ್ಞಾನ ಅಥವಾ ಮೆಡಿಸಿನ್ ನೊಬೆಲ್ ಪ್ರಶಸ್ತಿಯನ್ನು ಮಾರ್ಷಲ್ ಡಬ್ಲ್ಯು.ನೀರೆನ್ಬರ್ಗ್ ಮತ್ತು ರಾಬರ್ಟ್ ಡಬ್ಲ್ಯೂ ಜೊತೆ ಹಂಚಿಕೊಂಡಿದ್ದಾರೆ . ಖೊರಾನಾ ಅದೇ ವರ್ಷ ಕೊಲಂಬಿಯಾ ವಿಶ್ವವಿದ್ಯಾನಿಲಯದ ಲೂಯಿಸಾ ಗ್ರಾಸ್ ಹೋರ್ವಿಟ್ಜ್ ಪ್ರಶಸ್ತಿಯನ್ನು ಪಡೆದರು. == ಜನನ-ವಿದ್ಯಾಭ್ಯಾಸ == ಹರಗೋಬಿಂದ ಖುರಾನರವರ ಜನನ ಪಂಜಾಬಿನ ರಾಯಪುರದಲ್ಲಿ. ಸಣ್ಣ ಊರಿನ ಅಕ್ಷರಸ್ಥ ಕುಟುಂಬ ಇವರದ್ದು. ತಂದೆ ಕಂದಾಯ ವಸೂಲಿ ಅಧಿಕಾರಿ. ಇವರ ೧೨ನೇ ವಯಸ್ಸಿನಲ್ಲೇ ತಂದೆಯವರ ಮರಣ. ಕಷ್ಟಪಟ್ಟು ಪ್ರಾರಂಭಿಕ ವಿದ್ಯಾಭ್ಯಾಸ ಮುಗಿಸಿ, ನಂತರ ಲಾಹೋರ್‍‌ನ ಸರ್ಕಾರಿ ಕಾಲೇಜು ಸೇರಿ, ೧೯೪೫ರಲ್ಲಿ ಪಂಜಾಬ್ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದರು. ಕಾಲೇಜಿನಲ್ಲಿ ಓದುತ್ತಿದ್ದಾಗಲೇ ವಿಜ್ಞಾನದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದ ಇವರು, ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ದಲಾಲ್ ವಿದ್ಯಾರ್ಥಿವೇತನದ ಸಹಾಯದಿಂದ ಇಂಗ್ಲೆಂಡಿನ ಲಿವರ್‌ಪೂಲ್ ವಿಶ್ವವಿದ್ಯಾನಿಲಯದಲ್ಲಿ ಅಭ್ಯಸಿಸಿ ಪಿಎಚ್‌ಡಿ ಪದವಿ ಪಡೆದರು. == ಉದ್ಯೋಗ-ಸಂಶೋಧನೆ == ೧೯೪೮-೪೯ರಲ್ಲಿ ಜೂರಿಕ್ನಲ್ಲಿ ಸಂಶೋಧಕರಾಗಿದ್ದರು. ೧೯೫೨ರಲ್ಲಿ ಬ್ರಿಟಿಷ್ ಕೊಲಂಬಿಯ ವಿಶ್ವವಿದ್ಯಾನಿಲಯದಲ್ಲಿ ಸಾವಯವ ರಾಸಾಯನಿಕವಿಜ್ಞಾನ ವಿಭಾಗದ ಮುಖ್ಯಸ್ಥರಾದರು. ನಂತರದಲ್ಲಿ ವಿಸ್ಕಾನ್ಸಿನ್‌ ವಿಶ್ವವಿದ್ಯಾನಿಲಯದ 'ಕಿಣ್ವ ವಿಜ್ಞಾನ' ಸಂಶೋಧನಾಲಯದಲ್ಲಿ ಸಂಶೋಧನೆ ಮುಂದುವರೆಸಿದರು.೧೯೭೦ರಲ್ಲಿ ಮಸ್ಸಾಚುಸೆಟ್ಸ್ ತಂತ್ರಜ್ಞಾನಸಂಸ್ಥೆ ಸೇರಿ,ಜೀವಶಾಸ್ತ್ರ ಮತ್ತು ರಸಾಯನಶಾಸ್ತ್ರದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. == ವಂಶವಾಹಿ-ಜೀನ್ಸ್() == ಖುರಾನರ ದೊಡ್ಡ ಸಾಧನೆಯೆಂದರೆ, ಕೃತಕವಾಗಿ ವಂಶವಾಹಿಯನ್ನು ಸೃಷ್ಟಿಸಿದ್ದು.ಎಲ್ಲಾ ಜೀವಿಗಳಲ್ಲೂ ಇರುವ ಸೂಕ್ಷ್ಮ ಜೀವಕೋಶಗಳ ಕೋಶಬಿಂದುವಿನಲ್ಲಿ 'ಡಿಅಕ್ಸಿರೈಬೊ ನ್ಯೂಕ್ಲಿಯಿಕ್ ಆಮ್ಲ' ಎಂಬ ರಾಸಾಯನಿಕವಿರುತ್ತದೆ. ಈ ಆಮ್ಲವೇ 'ವಂಶಪಾರಂಪರತೆ' ಅಥವಾ 'ಅನುವಂಶೀಯತೆ'ಯನ್ನು ನಿರ್ಧರಿಸುತ್ತದೆ.ಇದನ್ನು ಡಿಎನ್‌ಎ() ಎನ್ನುತ್ತಾರೆ. == ಪ್ರಶಸ್ತಿ-ಪುರಸ್ಕಾರಗಳು == ೧೯೬೦ರಲ್ಲಿ ಖೊರಾನ ಅವರಿಗೆ ಕೆನಡಾ ಸಾರ್ವಜನಿಕ ಸೇವಾಪರಿಣತರ ಸಂಸ್ಥೆಯಿಂದ ಚಿನ್ನದ ಪದಕ ದೊರಕಿತು. ೧೯೬೭ರಲ್ಲಿ ಡ್ಯಾನಿಖೈಮನ್ ಬಹುಮಾನ ದೊರೆಯಿತು. ಖೊರಾನ ಅವರು ರಾಬರ್ಟ್ ಹಾಲಿ ಮತ್ತು ಮಾರ್ಶಲ್ ನೈರೆನ್‌ಬರ್ಗ್ ಅವರೊಂದಿಗೆ ಜಂಟಿಯಾಗಿ ೧೯೬೮ರಲ್ಲಿ ವೈದ್ಯಶಾಸ್ತ್ರದ ನೊಬೆಲ್ ಪ್ರಶಸ್ತಿ ಪಡೆದರು. ೧೯೮೭ರಲ್ಲಿ ಅಮೆರಿಕಾ ಸರ್ಕಾರ ರಾಷ್ಟ್ರಪ್ರಶಸ್ತಿ ನೀಡಿ ಗೌರವಿಸಿದೆ. == ನಿಧನ == ಡಾ.ಖುರಾನರವರು ನವೆಂಬರ್ ೯, ೨೦೧೧ ರಂದು, ಅಮೆರಿಕದ ಮೆಸ್ಸಾಚುಸೆಟ್ಸ್ ರಾಜ್ಯದ ಕಾನ್ಕಾರ್ಡ್ ನಗರದಲ್ಲಿ ತಮ್ಮ ೮೯ ವರ್ಷ ಪ್ರಾಯದಲ್ಲಿ ನಿಧನರಾದರು. ಅವರಿಗೆ ಪತ್ನಿ ಹಾಗೂ ಜೂಲಿಯ ಮತ್ತು ಡೇವ್ ಎಂಬ ಮಕ್ಕಳು ಇದ್ದಾರೆ. == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == 2017-03-22 ವೇಬ್ಯಾಕ್ ಮೆಷಿನ್ ನಲ್ಲಿ. 33rd : , ()